ಐದು ಭಾಷೆಗಳಲ್ಲಿ ಬರುತ್ತಿದೆ ರಕ್ಷಿತ್ ಶೆಟ್ಟಿ ಸಿನೆಮ! ಯಾವುದು ಈ ಚಿತ್ರ? ಸಂಪೂರ್ಣ ವಿವರ ಇಲ್ಲಿದೆ ನೋಡಿ

0 44

- Advertisement -

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರು ಬಹು ದೊಡ್ಡ ಗ್ಯಾಪ್ ನೀಡಿದ್ದರು. ಸುಮಾರು ಎರಡು ವರ್ಷಗಳ ಬಳಿಕ ಅವರು ಈಗ ತಮ್ಮ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಟ್ರೈಲರ್ ನೋಡಿದ ಎಲ್ಲಾ ಪ್ರೇಕ್ಷಕರಲ್ಲೂ ಸಿನಿಮಾ ಅತ್ಯದ್ಭುತ ವಾಗಿರುತ್ತದೆ ಎಂಬ ಭರವಸೆ ಮೂಡಿಸಿತ್ತು.

ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಎಲ್ಲಾ ಅಭಿಮಾನಿಗಳಲ್ಲೂ ಕಾಡುತ್ತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಸುಮಾರು 95% ಚಿತ್ರೀಕರಣ ಮುಗಿದಿದ್ದು ಬರುವ ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಲ್ಲಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಶುರುವಾಗಿದೆ.

ಚಿತ್ರದ ಕಥೆಗಾಗಿ ಸುಮಾರು ಒಂದು ವರ್ಷ ಸ್ಕ್ರಿಪ್ಟ್ ವರ್ಕ್ ನಡೆದಿದೆ. ಸತತವಾಗಿ 200 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರ ತಂಡ ಒಟ್ಟು ಆರು ನೂರು ದಿನಗಳ ಕಾಲ ಸಿನಿಮಾದ ಕೆಲಸಗಳಿಗಾಗಿ ಮೀಸಲಿಟ್ಟಿದೆ. ಒಟ್ಟಾರೆ ಐದು ಭಾಷೆಗಳಲ್ಲಿ ಹಾಗೂ ಎರಡು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು.

ಬಹಳ ಸಮಯದ ನಂತರ ತೆರೆ ಮೇಲೆ ಬರುತ್ತಿರುವ ರಕ್ಷಿತ್ ಶೆಟ್ಟಿ ಅವರ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

- Advertisement -

Leave A Reply

Your email address will not be published.

19 + 15 =