ಕುರುಕ್ಷೇತ್ರ ತಂಡದಿಂದ ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್..!

0 831

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಚಿತ್ರವಾದ ಕುರುಕ್ಷೇತ್ರ ಸೆಟ್ಟೇರಿ ಸುಮಾರು ಎರಡು ವರ್ಷಗಳೇ ಕಳೆದಿವೆ ಆದರೂ ಇದುವರೆಗೂ ಯಾವುದೇ ರೀತಿಯ ಆಡಿಯೋ ಆಗಲಿ ಅಥವಾ ಟ್ರೈಲರ್ ಆಗಲೀ ಬಿಡುಗಡೆಯಾಗಿಲ್ಲ. ಈ ಹಿಂದೆ ಎರಡು ಟೀಸರ್ಗಳನ್ನು ಬಿಟ್ಟುಕೊಟ್ಟಿದ್ದ ಚಿತ್ರತಂಡ ಮುಂದೆ ಯಾವುದೇ ರೀತಿಯ ಅಪ್ಡೇಟ್ಗಳನ್ನು ನೀಡದೆ ಸೈಲೆಂಟ್ ಆಗಿತ್ತು.

 

 

ನಾಗಣ್ಣ ನಿರ್ದೇಶನವಿರುವ ಕುರುಕ್ಷೇತ್ರ ಚಿತ್ರಕ್ಕೆ ಮುನಿರತ್ನ ಅವರು ಬಂಡವಾಳ ಹೂಡಿದ್ದು ಚೇಂಜಿಂಗ್ ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅಪಾರವಾದ ತಾರಾ ಬಳಗವೇ ಈ ಚಿತ್ರದಲ್ಲಿದೆ. ಇನ್ನು ಇದೀಗ ಕೆಲ ದಿನಗಳಿಂದ ಯಾವುದೇ ರೀತಿಯ ಅಪ್ಡೇಟ್ಗಳನ್ನು ನೀಡದೆ ಸೈಲೆಂಟ್ ಹಾಕಿದ ಕುರುಕ್ಷೇತ್ರ ಚಿತ್ರ ತಂಡದಿಂದ ಹಾಟ್ ನ್ಯೂಸ್ ಒಂದು ಹೊರಬಿದ್ದಿದೆ.

 

 

 

 

 

ಹೌದು ಅದೇನೆಂದರೆ ಕುರುಕ್ಷೇತ್ರ ಚಿತ್ರ ಸೆನ್ಸಾರ್ಗೆ ರೆಡಿಯಾಗಿದೆ ಎಂಬುದು. ಜೊತೆಗೆ ಕುರುಕ್ಷೇತ್ರ ಚಿತ್ರ ತ್ರೀಡಿಯಲ್ಲಿ ಬರಲಿದೆ ಎಂಬ ಇನ್ನೊಂದು ಸಿಹಿ ಸುದ್ದಿಯನ್ನು ಕುರುಕ್ಷೇತ್ರ ಚಿತ್ರ ತಂಡ ಬಿಟ್ಟುಕೊಟ್ಟಿದೆ. 2ಡಿ ಪ್ರಿಂಟ್ ಈಗಾಗಲೇ ಸಿದ್ಧವಾಗಿದ್ದು ಸೆನ್ಸಾರ್ ಗೇ ಅದನ್ನು ಕಳುಹಿಸಿದ್ದು 3ಡಿ ಪ್ರಿಂಟ್ ಶೇ.70 ರಷ್ಟು ಮುಗಿದಿದ್ದು ಇನ್ನೇನು ಸಂಪೂರ್ಣವಾಗಲಿದೆ. ಈ ಮೂಲಕ ಕುರುಕ್ಷೇತ್ರ ಚಿತ್ರವನ್ನು 3ಡಿನಲ್ಲಿ ಸಹ ನೋಡಿ ಆನಂದಿಸಬಹುದಾಗಿದೆ.

 

 

 

 

- Advertisement -

Leave A Reply

Your email address will not be published.

seven + seven =