ಕೆಜಿಎಫ್ ಚಿತ್ರಕ್ಕಾಗಿ ಕೆಇಬಿ ಆಫೀಸ್ ಸುಡ್ತಾರಂತೆ! ಸಿಎಂಗೆ ಕೊಟ್ಟ ಎಚ್ಚರಿಕೆ.ಏನಿದು ಸುದ್ದಿ ಇಲ್ಲಿದೆ ನೋಡಿ

0 171

- Advertisement -

ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರಿ ದಾಖಲೆಯನ್ನು ಮಾಡಿ ಇಡೀ ವಿಶ್ವವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಮೆಜಾನ್ ಪ್ರೈಮ್ ಗೆ ಕೆಜಿಎಫ್ ನ ಡಿಜಿಟಲ್ ರೈಟ್ಸ್ ಅನ್ನು ಭಾರಿ ಮೊತ್ತಕ್ಕೆ ನೀಡಲಾಗಿತ್ತು. ಇದರ ಜೊತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಜಿಎಫ್ ಚಿತ್ರವನ್ನು ಪ್ರಸಾರ ಮಾಡಲು ಹಕ್ಕನ್ನು ನೀಡಲಾಗಿತ್ತು. ಎಲ್ಲಾ ವರ್ಗದ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಕೆಜಿಎಫ್ ಸಿನಿಮಾ ನಾಳೆ 7 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ಪ್ರಸಾರವಾಗುವ ಸಮಯದಲ್ಲಿ ಕರೆಂಟು ಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಮಂಡ್ಯದಲ್ಲಿ ನಿಖಿಲ್ ವಿರುದ್ಧ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ಸುಮಲತಾ ಅವರಿಗೆ ದರ್ಶನ್ ಹಾಗೂ ನಟ ಇಬ್ಬರು ಎದೆಗುಂದದೆ ಸಾತ್ ನೀಡುತ್ತಿದ್ದಾರೆ. ಇದನ್ನು ಸಹಿಸಲಾಗದ ಜೆಡಿಎಸ್ ಪಕ್ಷ ಸುಮಲತಾ ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಂಡ್ಯದಲ್ಲಿ ಕರೆಂಟ್ ತೆಗೆದಿದ್ದರು.

ಇದರ ವಿರುದ್ಧ ಸುಮಲತಾ ದರ್ಶನ್ ಹಾಗೂ ಯಶ್ ಅವರು ವಾಗ್ದಾಳಿ ನಡೆಸಿದ್ದರು. ಇದೆ ಕೋಪದ ಮೇರೆಗೆ ಚಿತ್ರ ಪ್ರಸಾರವಾಗುವ ಸಮಯದಲ್ಲಿ ಕರೆಂಟ್ ತೆಗೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ವಿರೋಧವಾಗಿ ಯಶ್ ಅಭಿಮಾನಿಗಳು ಭದ್ರಾವತಿಯಲ್ಲಿ ಮೆಸ್ಕಾಂ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಅವರು ನಾಮಪತ್ರ ಸಲ್ಲಿಸುವಾಗ ಬೇಕಂತ ಕರೆಂಟ್ ತೆಗೆದಿದ್ದರು. ಚಿತ್ರ ಪ್ರಸಾರವಾಗುವ ಸಮಯದಲ್ಲಿ ಅದೇ ದ್ವೇಷಕ್ಕೆ ಕರೆಂಟ್ ತೆಗೆದರೆ ಕೇಬಲ್ ಆಫೀಸ್ ಅನ್ನು ಸುಟ್ಟು ಹಾಕುತ್ತದೆ ಎಂದು ಎಚ್ಚರಿಕೆಯ ಪತ್ರವೊಂದನ್ನು ನೀಡಿದ್ದಾರೆ.

- Advertisement -

Leave A Reply

Your email address will not be published.

15 − 9 =