ಚೇತನ್ ಶ್ರುತಿ ಹರಿಹರನ್ ಪರ ನಿಲ್ಲಲು ಇದೇ ಮೈನ್ ರೀಸನ್..!

0 513

- Advertisement -

ನಟಿ ಶೃತಿ ಹರಿಹರನ್ ಇತ್ತೀಚೆಗಷ್ಟೆ ಮೀಟೂ ಎಂಬ ಅಭಿಯಾನ ದಡಿಯಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂಬ ಅಘಾತಕಾರಿ ಸುದ್ದಿಯನ್ನು ಹೊರಹಾಕುವ ಮೂಲಕ ಸಂಚಲನವನ್ನೇ ಸೃಷ್ಟಿಸಿದ್ದಾಳೆ. ಅದು ಕೂಡ ದಕ್ಷಿಣ ಭಾರತದ ಒಬ್ಬ ಹಿರಿಯ ನಟನ ಮೇಲೆ ಆರೋಪವನ್ನು ಮಾಡುವ ಮೂಲಕ ತನ್ನ ಮೇಲೆ ಲೈಂಗಿಕ ಕಿರುಕುಳ ಆಗಿತ್ತು ಎಂಬುದನ್ನು ಇದೀಗ ವ್ಯಕ್ತಪಡಿಸುವುದರ ಮೂಲಕ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದಾಳೆ.

 

 

 

 

ಹೌದು ನಿಮಗೆಲ್ಲ ತಿಳಿದಿರುವ ಹಾಗೆ ನಟಿ ಶ್ರುತಿ ಹರಿಹರನ್ ತನ್ನ ಮೇಲೆ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡುತ್ತಾ ಇದ್ದಾಳೆ. ಇನ್ನು ಇವಳ ಆರೋಪವನ್ನು ಕೇಳಿದ ತಕ್ಷಣ ಸಿನಿಮಾ ಮಂದಿ ಇವಳಿಗೆ ತಲೆ ಸರಿ ಇಲ್ಲ ಹೋಗಿ ಹೋಗಿ ಅಂತ ಒಳ್ಳೆಯ ನಟನ ವಿರುದ್ಧ ಈ ರೀತಿಯಾಗಿ ಆರೋಪವನ್ನು ಮಾಡುತ್ತಿದ್ದಾಳಲ್ಲಾ ಇದು ಸುಳ್ಳು ಎಂದು ವಾದಿಸತೊಡಗಿದರು.

 

 

 

ಹಾಗೂ ಅರ್ಜುನ್ ಸರ್ಜಾ ಅವರು ಸಹ ಇದನ್ನು ಸುಳ್ಳು ಆರೋಪ ಎಂದು ತಳ್ಳಿ ಹಾಕುವುದರ ಮೂಲಕ ಇದೊಂದು ಷಡ್ಯಂತ್ರ ಎಂದು ಹೇಳಿಕೆ ನೀಡಿದ್ದರು. ಆದರೂ ಸಹ ನಟಿ ಶ್ರುತಿ ಹರಿಹರನ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಳು. ಅಷ್ಟೇ ಅಲ್ಲದೇ ನಟಿ ಶ್ರುತಿ ಹರಿಹರನ್ ಬೆಂಬಲಕ್ಕೆ ಕನ್ನಡದ ನಟ ಚೇತನ್ ಅವರು ಸಹ ನಿಂತರು.

 

 

 

 

 

 

ಬಿರುಗಾಳಿ ಮೈನಾ ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಟ ಚೇತನ್ ಶ್ರುತಿ ಹರಿಹರನ್ ಪರ ನಿಲ್ಲಲು ಕಾರಣವೇನು ಎಂದು ಆಶ್ಚರ್ಯವನ್ನು ಪಡತೊಡಗಿದ್ದರು. ಇನ್ನು ಇದೀಗ ನಟ ಚೇತನ್ ಅವರು ಶ್ರುತಿ ಹರಿಹರನ್ ಪರ ನಿಲ್ಲಲು ಕಾರಣವೇನು ಎಂಬುದು ಬಹಿರಂಗವಾಗಿದೆ.

 

 

ಹೌದು ನಟ ಚೇತನ್ ಶ್ರುತಿ ಹರಿಹರನ್ ಪರ ನಿಲ್ಲಲು ಕಾರಣ ಪ್ರೇಮ ಬರಹ ಚಿತ್ರ. ಹೌದು ಚಂದನ್ ಮತ್ತು ಐಶ್ವರ್ಯಾ ಅರ್ಜುನ್ ನಟಿಸಿದ್ದ ಪ್ರೇಮ ಬರಹ ಚಿತ್ರವನ್ನು ಅರ್ಜುನ್ ಸರ್ಜಾ ಅವರು ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ನಟ ಚಂದನ್ ಅವರ ಮೊದಲು ಚೇತನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು ಆದರೆ ತದನಂತರ ಚೇತನ್ ಅವರನ್ನು ಕೈಬಿಟ್ಟು ಚಂದನ್ ಅವರನ್ನು ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.

 

 

 

 

 

ಚಿತ್ರದಿಂದ ತಮ್ಮನ್ನು ಕೈಬಿಟ್ಟರು ಎಂಬ ದ್ವೇಷದಿಂದ ಇದೀಗ ನಟ ಚೇತನ್ ನಟಿ ಶೃತಿ ಹರಿಹರನ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೇವಲ ಒಂದು ಚಿತ್ರದಿಂದ ಕೈಬಿಟ್ಟರು ಎಂಬ ಮಾತ್ರಕ್ಕೆ ವೈಯಕ್ತಿಕ ವಿಚಾರದಲ್ಲಿ ಅವರ ಜೀವನವನ್ನೇ ಹಾಳು ಮಾಡುವಂತಹ ವಿಷಯಕ್ಕೆ ಉತ್ತೇಜನ ನೀಡುವುದು ಎಷ್ಟರ ಮಟ್ಟಿಗೆ ಸರಿ?

 

 

 

 

- Advertisement -

Leave A Reply

Your email address will not be published.

2 + nine =