ಜೀವನದಲ್ಲಿ ಏನೂ ಸಾಧನೆ ಮಾಡಿಲ್ಲ ಎಂದು ಲೈವ್ ಸೂಸೈಡ್ ಮಾಡಿಕೊಂಡ್ಳು ಈ ಹುಡುಗಿ

0 239

- Advertisement -

ಆತ್ಮಹತ್ಯೆಗೆ ಶರಣಾದ ದುರ್ದೈವಿ ವಿದ್ಯಾರ್ಥಿನಿಯ ಹೆಸರು ಯಾಸ್ಮಿನ್ ತಾಜ್. ಜೆ.ಎಸ್.ಎಸ್. ಕಾಲೇಜಿನಲ್ಲಿ ಕಾಮರ್ಸ್ ವ್ಯಾಸಾಂಗ ಮಾಡುತ್ತಿದ್ದ ಈ ಯುವತಿ , ಇದೇ ಜನವರಿ 10 ರಂದು ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ. ಅಲ್ಲದೆ ಆಗ ಓದು ನನ್ನ ತಲೆಗೆ ಹತ್ತಲಿಲ್ಲ‌. ನಾನೊಬ್ಬ ಡಲ್ ಸ್ಟೂಡೆಂಟ್ ಎಂದೆಲ್ಲಾ ಆಕೆ ಲೈವ್ ನಲ್ಲಿ ಹೇಳಿದ್ದಾಳೆ.

 

ಜೀವನದಲ್ಲಿ ಸಿಂಗರ್ ಅಥವಾ ಲಾಯರ್ ಆಗಬೇಕೆನ್ನುವ ಆಸೆಯಿತ್ತು. ಆದರೆ ದೇವರು ನನ್ನ ಆಸೆಯನ್ನು ಪೂರೈಸಲಿಲ್ಲ ಎಂದು ಹೇಳಿದ ಯುವತಿ, ಆರೋಗ್ಯ ಸಮಸ್ಯೆಯಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ‌.

 

ಈಗ ಪ್ರಿಪರೇಟರಿ ಪರೀಕ್ಷೆಗಳ ಹಾಲ್ ಟಿಕೆಟ್ ಕೊಟ್ಟಿಲ್ಲ ,ಜೀವನದಲ್ಲಿ ಏನೂ ಸಾಧಿಸಲಿಲ್ಲ ಎಂದು ಕಣ್ಣೀರು ಸುರಿಸಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾ, ಈ ವಿಡಿಯೋ ನ ಲೈಕ್ ಮಾಡಿ, ಶೇರ್ ಮಾಡಿ. ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಹೇಳಿ ಎಂದಿದ್ದಾಳೆ. ಇದಾದ ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾಳೆ.

ಯಾರು ಏನೇ ಸಾಧನೆ ಮಾಡಿದರೂ, ಕಷ್ಟದಿಂದ ಕೆಲವರು ಮುಂದೆ ಬಂದ ಉದಾಹರಣೆಗಳು ಕಣ್ಣ ಮುಂದೆ ನೂರಿದ್ದರೂ, ಕೆಲವರು ಜೀವನದಲ್ಲಿ ಹತಾಶರಾಗಿ, ಬಾಳು ನಡೆಸಲು ನಿರಾಶರಾಗಿ, ಇಲ್ಲಿಗೆ ಜೀವನ ಕೊನೆ ಎಂದು ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ.

 

 

ಮೈಸೂರಿನಲ್ಲಿ ಒಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ಇದೇ ರೀತಿಯ ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಈಕೆ ಆತ್ಮಹತ್ಯೆಗೆ ಮಾಡಿಕೊಳ್ಳಲು ಲೈವ್ ಗೆ ಬಂದು ತನ್ನ ನೋವನ್ನು ಹೇಳಿಕೊಂಡು ತನ್ನ ಜೀವವನ್ನು ಬಿಟ್ಟಿದ್ದಾಳೆ.

 

ಬದುಕಿದ್ದಾಗ ಯಾರೂ ಲೈಕ್ ಮಾಡಲಿಲ್ಲ,ಈಗಲಾದರೂ ಲೈಕ್ ಮಾಡಿ, ಸಾವಿನ ವೀಡಿಯೋ ಶೇರ್ ಮಾಡಿ ಎನ್ನುವ ಆಕೆಯ ನುಡಿಗಳು ನಿಜಕ್ಕೂ ಆಲೋಚಿಸುವಂತೆ ಮಾಡುತ್ತದೆ. ಜೀವನ ಎಂದರೆ ಕೇವಲ ಲೈಕ್ ಅಂಡ್ ಶೇರ್ ಅನ್ನುವುದು ಅಲ್ಲ ಎಂಬುದು ಎಲ್ಲರೂ ತಿಳಿಯಬೇಕಿದೆ.

- Advertisement -

Leave A Reply

Your email address will not be published.

ten − three =