ದಿ ವಿಲನ್ ಚಿತ್ರದ ಯಶಸ್ಸಿಗಾಗಿ ಕೋಣ ಕಡಿದವರಿಗೆ ಎಂತಹ ಪರಿಸ್ಥಿತಿ ಬಂತು ವಿಡಿಯೋ ನೋಡಿ..!

0 1,033

- Advertisement -

ದಿ ವಿಲನ್ ಚಿತ್ರ ಕಳೆದ ವಾರ ತೆರೆ ಕಂಡು ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಮತ್ತು ಕ್ರೇಜ್ ಇತ್ತು. ಈ ಕಾರಣದಿಂದಾಗಿ ಚಿತ್ರಮಂದಿರದ ಮುಂದೆ ಬಿಡುಗಡೆಯ ದಿನ ಹಾಗೂ ಮುಂದಿನ ಎರಡು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

 

 

 

 

 

ದಿ ವಿಲನ್ ಬಿಡುಗಡೆಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅಭಿಮಾನಿಗಳು ತಮ್ಮದೆ ಆದ ರೀತಿಯಲ್ಲಿ ದಿ ವಿಲನ್ ಅನ್ನು ಬರಮಾಡಿಕೊಂಡರು. ಥಿಯೇಟರ್ ಮುಂಭಾಗದಲ್ಲಿ ಕಟೌಟ್ಗಳಿಗೆ ಹಾರ ಹಾಲು ಅಭಿಷೇಕ ಮಾಡುವುದರ ಜೊತೆಗೆ ಭಿನ್ನ ವಿಭಿನ್ನವಾದ ರೀತಿಯಲ್ಲಿ ಬ್ಯಾನರ್ಗಳನ್ನು ಕಟ್ಟಿ ಸಂಭ್ರಮ ಪಟ್ಟರು..

 

 

ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದಾಗ ತಮ್ಮ ನೆಚ್ಚಿನ ಹೀರೋನ ಕಟೌಟ್ ಮತ್ತು ಪೋಸ್ಟರ್ ಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೀರಿ. ಆದರೆ ದಿ ವಿಲನ್ ಬಿಡುಗಡೆಯಾದ ಸಂದರ್ಭದಲ್ಲಿ ಕೆಲ ಸುದೀಪ್ ಅಭಿಮಾನಿಗಳು ಕೋಣದ ತಲೆಯನ್ನು ಕತ್ತರಿಸಿ ರಕ್ತದಿಂದ ಸುದೀಪ್ ಅವರ ಪೋಸ್ಟರ್ ಗೆ ಅಭಿಷೇಕವನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

 

 

 

ಈ ವಿಕೃತ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ತದನಂತರ ಈ ವಿರುದ್ಧ ಪೊಲೀಸರು ಕ್ರಮವನ್ನು ಕೈಗೊಂಡಿದ್ದು ಆರೋಪಿಗಳನ್ನು ಬಂಧಿಸಿ ಇದೀಗ ಲಾಠಿ ಏಟನ್ನು ನೀಡಿದ್ದಾರೆ. ಕೋಣದ ತಲೆಯನ್ನು ಕತ್ತರಿಸಿ ಸಂಭ್ರಮಿಸಿದವರಿಗೆ ಪೊಲೀಸರು ಯಾವ ರೀತಿ ಏಟು ಕೊಟ್ಟಿದ್ದಾರೆ ಎಂಬ ವಿಡಿಯೋ ಮುಂದೆ ಇದೆ ನೋಡಿ..

 

 

https://m.facebook.com/story.php?story_fbid=1908480835933106&id=1908478045933385

 

 

 

- Advertisement -

Leave A Reply

Your email address will not be published.

twenty + 11 =