ದಿ ವಿಲನ್ ನಲ್ಲಿ ಶಿವಣ್ಣನ ಅಸಲಿ ಗೆಟಪ್ ಹೀಗಿತ್ತು ನೋಡಿ..!

0 306

- Advertisement -

ದಿ ವಿಲನ್ ಕಳೆದ ವಾರವಷ್ಟೇ ಬಿಡುಗಡೆಯಾದ ಕನ್ನಡದ ಬಹು ನಿರೀಕ್ಷಿತ ಚಿತ್ರ. ಕಿಚ್ಚ ಸುದೀಪ್ ಮತ್ತು ಶಿವಣ್ಣ ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಚಿತ್ರದ ಮೇಲೆ ಸಾಕಷ್ಟು ಹೈಪ್ ಮತ್ತು ಕ್ರೇಜ್ ಕ್ರಿಯೇಟ್ ಆಗಿತ್ತು. ಹಾಡು ಮತ್ತು ಟೀಸರ್ ಗಳಿಂದ ಮತ್ತಷ್ಟು ಹೈಪ್ ಹೆಚ್ಚಿಸಿದ್ದ ಚಿತ್ರ ಕಳೆದ ವಾರವಷ್ಟೇ ಪ್ರೇಕ್ಷಕರಿಗೆ ದರ್ಶನ ಭಾಗ್ಯ ನೀಡಿತು.

 

 

ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ದಿ ವಿಲನ್ ಚಿತ್ರ ಸಾಕಷ್ಟು ಕಾಂಟ್ರವರ್ಸಿ ಗಳನ್ನು ಕ್ರಿಯೇಟ್ ಮಾಡಿತು. ಅದರಲ್ಲಿ ಶಿವರಾಜಕುಮಾರ್ ಅವರ ಗೆಟಪ್ ಮತ್ತು ಅವರ ಪಾತ್ರದ ಕುರಿತಾಗಿ ನಿರ್ಮಾಣವಾಗಿದ್ದ ಕಾಂಟ್ರವರ್ಸಿ ಅತಿ ದೊಡ್ಡ ರೀತಿಯಲ್ಲಿ ಇತ್ತು.

 

 

ಚಿತ್ರದಲ್ಲಿ ಶಿವಣ್ಣ ಅವರಿಗೆ ನೀಡಿರುವ ಪಾತ್ರ ಮತ್ತು ಗೆಟಪ್ ಅಷ್ಟು ಸರಿಯಾಗಿ ಇಲ್ಲ ಶಿವಣ್ಣ ಅವರಿಗೆ ಅವಮಾನ ಮಾಡಲಾಗಿದೆ ಎಂದು ಪ್ರೇಮ್ ಅವರ ವಿರುದ್ಧ ಶಿವಣ್ಣ ಅಭಿಮಾನಿಗಳು ಕಿಡಿಕಾರಿದರು. ಇನ್ನು ಪ್ರೇಮ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಕ್ಷಕರು ತಮ್ಮದೇ ಆದ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡರು ಇದನ್ನು ತಡೆದುಕೊಳ್ಳಲಾಗದ ಪ್ರೇಮ್ ಈ ಕುರಿತಾಗಿ ಪೊಲೀಸ್ ದೂರನ್ನು ಸಹ ದಾಖಲಿಸಿದ್ದರು.

 

 

 

ಇನ್ನು ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಷಯವೇನೆಂದರೆ ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಅವರ ಗೆಟಪ್ ಮೊದಲಿಗೆ ಯಾವ ರೀತಿ ಇತ್ತು ಎಂಬ ಫೋಟೋಗಳು ಲೀಕ್ ಆಗಿರುವುದು. ಹೌದು ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಅವರ ಗೆಟಪ್ ಮೊದಲಿಗೆ ಈ ರೀತಿಯಾಗಿ ಮಾಡಬೇಕು ಎಂಬ ಯೋಜನೆ ಇತ್ತು ಎನ್ನುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆ ಫೋಟೋಗಳು ಮುಂದೆ ಇದೆ ನೋಡಿ..

 

 

 

 

ಶಿವಣ್ಣ ಅವರು ಬೇರೆ ಚಿತ್ರಗಳಲ್ಲೂ ಸಹ ಕಮಿಟ್ ಹಾಕಿದ್ದ ಕಾರಣದಿಂದ ಮೀಸೆ ಮತ್ತು ಗಡ್ಡ ಬಿಡುವ ಯೋಜನೆಗೆ ಕತ್ತರಿ ಹಾಕಲಾಯಿತು ಎನ್ನಲಾಗಿದೆ.

 

 

 

 

 

 

- Advertisement -

Leave A Reply

Your email address will not be published.

6 + sixteen =