ದಿ ವಿಲನ್ ಬಗ್ಗೆ ತಪ್ಪಾಗಿ ಮಾತನಾಡಿದವರಿಗೆ ಪಂಚ್ ಕೊಟ್ಟ ಪ್ರೇಮ್..! ವಿಡಿಯೋ ನೋಡಿ

0 69

- Advertisement -

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ದಿ ವಿಲನ್. ಹೌದು ಜೋಗಿ ಪ್ರೇಮ್ ನಿರ್ದೇಶನದ ಮತ್ತು ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ನಿರೀಕ್ಷಿತ ಚಿತ್ರ ಕಳೆದ ವಾರ ದೇಶದಾದ್ಯಂತ ಬಿಡುಗಡೆಯಾಗಿತ್ತು. ದೊಡ್ಡ ಮೊತ್ತದ ವೆಚ್ಚದೊಂದಿಗೆ ನಿರ್ಮಾಣ ವಾಗಿದ್ದ ಈ ಚಿತ್ರ ಇಬ್ಬರು ಸ್ಟಾರ್ ನಟರು ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಸಖತ್ ಕ್ರೇಜ್ ಮತ್ತು ಹೈಪ್ ಅನ್ನು ಹುಟ್ಟು ಹಾಕಿತ್ತು.

 

 

ಆದರೆ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸನ್ನು ಗಳಿಸಿದೆ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಟೀಕೆಗೂ ಸಹ ಒಳಗಾಯಿತು. ದಿ ವಿಲನ್ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಹೊತ್ತುಕೊಂಡು ಕಾಯುತ್ತಿದ್ದ ಪ್ರೇಕ್ಷಕರು ಚಿತ್ರ ನೋಡಿದ ನಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸತೊಡಗಿದರು. ಇಂಥ ಚಿತ್ರ ಮಾಡೋದಕ್ಕೆ ಎರಡು ವರ್ಷ ಬೇಕಾಯಿತಾ ಸರಿಯಾದ ಚಿತ್ರಕಥೆ ಇಲ್ಲ ಹೇಳಿಕೊಳ್ಳುವಂತ ಚಿತ್ರವೆ ಅಲ್ಲ ಎಂದು ಪ್ರೇಕ್ಷಕರು ತಮಗನಿಸಿದ್ದನ್ನು ನೇರವಾಗಿ ಹೇಳಿಬಿಟ್ಟರು.

 

 

 

 

ಇನ್ನು ಪ್ರೇಕ್ಷಕರಷ್ಟೇ ಅಲ್ಲದೇ ಸ್ವತಃ ಸುದೀಪ್ ಮತ್ತು ಶಿವಣ್ಣ ಅವರ ಅಪಾರ ಅಭಿಮಾನಿಗಳು ದಿ ವಿಲನ್ ಚಿತ್ರ ಚೆನ್ನಾಗಿಲ್ಲ ಎಂಬ ಫೇಸ್ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹೇಳತೊಡಗಿದರು. ಇನ್ನು ಇದು ಇಷ್ಟಕ್ಕೆ ಮುಗಿಯದೆ ಈ ಟೀಕೆ ಪ್ರೇಮ್ ಅವರ ವೈಯಕ್ತಿಕ ವಿಚಾರವನ್ನು ಸಹ ತಲುಪಿತು.

 

 

 

ಹೌದು ದಿ ವಿಲನ್ ಚಿತ್ರ ಇಷ್ಟವಾಗದ ಕೆಲ ಜನರು ಪ್ರೇಮ್ ಅವರ ವೈಯಕ್ತಿಕ ವಿಚಾರದ ಬಗ್ಗೆ ಟೀಕೆಗಳನ್ನು ಮಾಡತೊಡಗಿದರು. ಇದನ್ನು ಕಂಡ ಪ್ರೇಮ್ ಬೇಸರಗೊಂಡಿದ್ದು ಒಂದು ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ನೆನ್ನೆಯಷ್ಟೇ ಪ್ರೆಸ್ ಮೀಟ್ ಕರೆದಿದ್ದ ದಿವಿನ್ ಚಿತ್ರತಂಡದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೇಮ್ ಈ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಹಾಗೂ ಇಂದು ಅವರು ಈ ರೀತಿಯಾಗಿ ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಅನ್ನು ಲಾಡ್ಜ್ ಮಾಡಿದ್ದಾರೆ. ಹೌದು ಇಂದು ನಿರ್ದೇಶಕ ಪ್ರೇಮ್ ಅವರು ರವಿ ಡಿ ಚಣ್ಣನವರ್ ಅವರ ಬಳಿ ತಮ್ಮ ವಿರುದ್ಧ ವೈಯಕ್ತಿಕವಾಗಿ ಟೀಕೆಗಳನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರೊಂದನ್ನು ನೀಡಿದ್ದು ಆ ವಿಡಿಯೋ ಮುಂದೆ ದೆ ತಪ್ಪದೆ ನೋಡಿ.

 

 

https://m.facebook.com/story.php?story_fbid=1977365862320348&id=100001408606855

 

 

 

 

 

- Advertisement -

Leave A Reply

Your email address will not be published.

nine + 17 =