ನಟ ಕಿಚ್ಚ ಸುದೀಪ್ ಗೆ ಜಾರಿಯಾದ ಸಮನ್ಸ್

0 125

- Advertisement -

ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ಬಳಸಿಕೊಂಡ ಮನೆಯ ಬಾಡಿಗೆ ಹಣ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಗೆ ಎರಡನೇ ಜಿಎಂಎಸ್ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ .

ಮಾರ್ಚ್ 26ರಂದು ಹಾಜರಾಗು ವಂತೆ ನಟ ಸುದೀಪ್ ಮತ್ತು ವಾರಸ್ದಾರ ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕ ಮಹೇಶ್ ಗೆ ಸಮನ್ಸ್ ಜಾರಿ ಮಾಡಲಾಗಿದೆ . ಸುದೀಪ್ ವಿರುದ್ಧ ಮನೆ ಮಾಲೀಕ ದೀಪಕ್ ಮಯೂರ 2017 ಜುಲೈ 12ರಂದು ದೂರು ದಾಖಲಿಸಿದ್ದರು ಮಲ್ಲಂದೂರು ಠಾಣೆ ಪೊಲೀಸರು ಸುದೀಪ್ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ್ದರು .

ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರವಾಹಿ ಚಿತ್ರೀಕರಣ 2016 ನವೆಂಬರ್ ನಲ್ಲಿ ನಡೆಸಲಾಗಿತ್ತು . ಮನೆ ಬಾಡಿಗೆ ಕೊಡದೆ 95 ಲಕ್ಷ ಬೆಲೆಬಾಳುವ ಕಾಫಿ ತೋಟ ಹಾಳು ಮಾಡುವುದಾಗಿ ಮಾಲೀಕ ದಿಲೀಪ್ ಮಯುರಿ ಆರೋಪಿಸಿದ್ದರು .

ಸುದೀಪ್ ವಿರುದ್ಧ ದಾಖಲಿಸಿರುವ ಕೇಸು ಹಿಂಪಡೆಯುವಂತೆ ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷರ ಹೆಸರಿನಲ್ಲಿ ತಮಗೆ ಬೆದರಿಕೆ ಹಾಕಲಾಗಿದೆ ಎಂದು ಇತ್ತೀಚಿಗೆ ದಿಲೀಪ್ ಆರೋಪಿಸಿದ್ದಾರೆ

- Advertisement -

Leave A Reply

Your email address will not be published.

nine − 2 =