ನಿರ್ಮಾಪಕ ಮುನಿರತ್ನ ಮೇಲೆ ಮೇಲೆ ಕಿಡಿಕಾರಿದ ಅಂಬಿ-ಡಿಬಾಸ್ ಫ್ಯಾನ್ಸ್

0 154

- Advertisement -

ನಿರ್ಮಾಪಕ ಹಾಗೂ ಶಾಸಕರಾದ ಮುನಿರತ್ನ ಅವರು ಮಂಡ್ಯ ಚುನಾವಣೆ ಪ್ರಚಾರ ಮಾಡಿದ್ದಾರೆ. ಮೈತ್ರಿ ಸರ್ಕಾರದ ನಿಖಿಲ್ ಕುಮಾರ್ ಅವರ ಬಗ್ಗೆ ಪ್ರಚಾರ ಮಾಡಿದ ಮುನಿರತ್ನ ಅವರು, ಅಂಬಿ ನಿಧನರಾದ ಸಮಯದಲ್ಲಿ ನಡೆದ ವಿಷಯವನ್ನು ಪ್ರಸ್ತಾಪಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂಬರೀಶ್ ಅವರು ನಿಧನರಾದ ಸಮಯದಲ್ಲಿ ನಡೆದ ಘಟನೆಯೊಂದನ್ನು ಹೇಳಿ ಅಂಬರೀಶ್ ಹಾಗೂ ದರ್ಶನ್ ಅಭಿಮಾನಿಗಳ ಕೋಪಕ್ಕೆ ಬಲಿಯಾಗಿದ್ದಾರೆ. “ನಟ ಅಂಬರೀಶ್ ನಿಧನರಾದ ಸಮಯದಲ್ಲಿ ನಿಖಿಲ್ ಅವರು ಮಧ್ಯ ರಾತ್ರಿ ಎರಡು ಗಂಟೆಗೆ ನನ್ನೊಡನೆ ಸೇರಿ ಅವರ ಅಂತ್ಯಸಂಸ್ಕಾರ ಜಾಗವನ್ನು ಪತ್ತೆ ಮಾಡುತ್ತಿದ್ದೆವು. ಅಂಬಿ ಅವರ ಅಂತ್ಯಸಂಸ್ಕಾರ ಮಾಡುವ ಜಾಗವನ್ನು ಗುರುತಿಸಿದ್ದು ಇದೇ ನಿಖಿಲ್ ಕುಮಾರಸ್ವಾಮಿ ಎಂದು ನಾನು ಪ್ರಮಾಣ ಮಾಡಿ ಹೇಳುತ್ತೇನೆ”, ಎಂದು ಪ್ರಚಾರದಲ್ಲಿ ಹೇಳಿ ನಿಖಿಲ್ ಪರ ವೋಟ್ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಬಿ ಹಾಗೂ ದರ್ಶನ್ ಅಭಿಮಾನಿಗಳು, “ನಿಖಿಲ್ ಅವರು ರಾಜಕೀಯಕ್ಕೆ ಸೇರಿರಲಿಲ್ಲ.

ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ಕೆಲಸವನ್ನು ಸರ್ಕಾರ ಮಾಡಿದ್ದು. ಸರ್ಕಾರದಲ್ಲಿ ನಿಖಿಲ್ ಪಾತ್ರವೇನು? ಸಿಎಂ ಪುತ್ರನಾದ ಕಾರಣ ಜಾಗ ಗುರುತಿಸಲು ಅವರಿಗೆ ಯಾವ ಹಕ್ಕು ಇದೆ? ಹಾಗೂ ಇಷ್ಟು ದಿನ ಈ ವಿಷಯ ಹೊರ ಬರದೆ ಚುನಾವಣೆ ಸಮಯದಲ್ಲಿ ಏಕೆ ಹೇಳುತ್ತಿದ್ದಾರೆ”, ಎಂಬ ಪ್ರಶ್ನೆಗಳನ್ನು ಕೇಳಿ ಮುನಿರತ್ನ ಅವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುನಿರತ್ನ ಕೊಟ್ಟಿರುವ ಹೇಳಿಕೆ ಏನು ನಂಬದ ಹಲವರು ಇವೆಲ್ಲ ಎಲೆಕ್ಷನ್ ಗಿಮಿಕ್ ಎಂದು ಹೇಳಿದ್ದಾರೆ. ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೆ ಮುನಿರತ್ನ ನಿರ್ಮಾಪಕರಾಗಿದ್ದು, ಚಿತ್ರದಲ್ಲಿ ನಿಖಿಲ್ ಅವರಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ.

ಅಭಿಮನ್ಯುವಿನ ಪಾತ್ರವನ್ನು ನಿರ್ವಹಿಸುತ್ತಿರುವ ನಿಖಿಲ್ ಗೆ ಚಿತ್ರದಲ್ಲಿ ಬೇರೆ ಎಲ್ಲರಿಗಿಂತ ಹೆಚ್ಚಿನ ಮಹತ್ವ ನೀಡಿದ್ದಾರೆ. ಸಿಎಂ ಪುತ್ರ ಎಂಬ ಕಾರಣದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಹಲವರು ಆಡಿಕೊಳ್ಳುತ್ತಿದ್ದಾರೆ.ಹಿಂದಿನಿಂದಲೂ ಎಲ್ಲಾ ಕಲಾವಿದರಿಗೂ ಸಮಾನ ಹಕ್ಕು ಇರಬೇಕು ಎಂದು ಹೇಳಿಕೊಂಡು ಬರುತ್ತಿರುವ ದರ್ಶನ್ ಅವರ ಅಭಿಮಾನಿಗಳು ಈ ವಿಷಯವಾಗಿ ಮುನಿರತ್ನ ಅವರೊಡನೆ ಮಾತನಾಡಬೇಕು ಹಾಗೂ ಈ ವಿಷಯವನ್ನು ವಿರೋಧಿಸಬೇಕು ಎಂದು ಹೇಳುತ್ತಿದ್ದಾರೆ.

- Advertisement -

Leave A Reply

Your email address will not be published.

eighteen + ten =