ನೀನು ಯಾವನ್ ಅನ್ನೋದು ನನಗೆ ಬೇಕಿಲ್ಲ – ಏಕವಚನದಲ್ಲಿ ಚೇತನ್ ಬೆವರಿಳಿಸಿದ ಧ್ರುವ..!

0 192

- Advertisement -

ಇತ್ತೀಚಿನ ಕೆಲ ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ವಿಷಯವೆಂದರೆ ಅದು “ಮೀಟೂ” ಅಭಿಯಾನ. ಅದರಲ್ಲಿ ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ತನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದು ಆರೋಪವನ್ನು ಮಾಡಿದ್ದಳು.

 

 

 

 

ಈ ಆರೋಪ ಕೇಳಿದ ಅಭಿಮಾನಿಗಳೆಲ್ಲ ಒಂದು ಕ್ಷಣ ಶಾಕ್ ಆದರು. ಅಂತಹ ಹಿರಿಯ ನಟನ ಮೇಲೆ ಇದೀಗ ತಾನೇ ಅಂಬೆಗಾಲಿಡುತ್ತಿರುವ ನಟಿ ಈ ರೀತಿಯ ದೊಡ್ಡ ಅಪವಾದವನ್ನು ಇಷ್ಟು ಸುಲಭವಾಗಿ ಹೊರಿಸುತ್ತಿದ್ದಾಳಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

 

 

 

 

 

ಇನ್ನು ನಟಿ ಶೃತಿ ಹರಿಹರನ್ ಬೆಂಬಲಕ್ಕೆ ಕನ್ನಡದ ನಟ ಚೇತನ್ ಅವರು ಸಹ ನಿಂತರು. ನಟಿ ಶ್ರುತಿ ಹರಿಹರನ್ ಗೆ ನ್ಯಾಯ ಕೊಡಿಸಬೇಕೆಂದು ತಮ್ಮ ಫೈರ್ ಸಂಸ್ಥೆಯ ಮುಖಾಂತರ ಹೋರಾಟಕ್ಕೆ ನಿಂತಿದ್ದಾರೆ.

 

 

 

 

 

ಇನ್ನು ಚೇತನ್ ಅವರ ಈ ನಡೆಯನ್ನು ಪ್ರಶ್ನಿಸಿರುವ ಧ್ರುವ ಸರ್ಜಾ ಅವರು ಚೇತನ್ ಅವರೊಡನೆ ಫೋನ್ ಕಾಲ್ ನಲ್ಲಿ ಮಾತನಾಡಿದ್ದಾರೆ. ಚೇತನ್ ಅವರೊಡನೆ ಫೋನ್ ಕಾಲ್ ನಲ್ಲಿ ಮಾತನಾಡಿದ ಧ್ರುವ ಅವರನ್ನು ಏಕವಚನದಲ್ಲಿಯೇ ಮಾತನಾಡಿಸಿದ್ದಾರೆ. ನೀನು ಅಮೆರಿಕದಿಂದ ಬಂದಿದ್ದೀನಿ ಎಂದ ಮಾತ್ರಕ್ಕೆ ಇಲ್ಲಿ ಆ ತರದ ಆಟಗಳನ್ನು ಆಡಬೇಡ.. ಈ ರೀತಿ ಹುಡುಗಿಯರಿಂದ ಮುಂದೆ ಇಟ್ಟುಕೊಂಡು ಆಟ ಆಡುವುದನ್ನು ನಿಲ್ಲಿಸು ಎಂದು ಒಪನ್ ಆಗಿ ಏಕವಚನದಲ್ಲಿ ಹೇಳಿದ್ದಾರೆ.

 

 

 

 

 

ಫೋನ್ ಕಾಲ್ ಉದ್ದಕ್ಕೂ ಧ್ರುವ ಅವರು ಚೇತನ್ ಅವರನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ನೀನು ಮಾಡುತ್ತಿರುವ ಆರೋಪವೆಲ್ಲ ಸುಳ್ಳು ಎಂದು ಏಕವಚನದಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

 

 

 

- Advertisement -

Leave A Reply

Your email address will not be published.

20 + 17 =