ಪವರ್ ಸ್ಟಾರ್ ಬರ್ತಡೆ ಪ್ರಯುಕ್ತ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

0 162

- Advertisement -

ಇವತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನ .ಅವರ ಹುಟ್ಟುಹಬ್ಬದ ಸಲುವಾಗಿ ಎಲ್ಲೆಡೆ ಭರ್ಜರಿ ಆಚರಣೆ ನಡೆಯುತ್ತಿದೆ. ಈಗ ಪುನೀತ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ಸುದ್ದಿಯಾಗಿದ್ದಾರೆ. ಈ ಹಿಂದೆ ದರ್ಶನ್ ಅವರ ಹುಟ್ಟು ಹಬ್ಬಕ್ಕೂ ಸಹ ಪುನೀತ್ ಅವರು ವಿಶ್ ಮಾಡಿದ್ದರು.

ಇಬ್ಬರು ನಟರು ಸರಿ ಸುಮಾರು ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಬಂದವರು. ದರ್ಶನ್ ಅವರ ಎಷ್ಟು ಸಿನಿಮಾಗಳಿಗೆ ಪುನೀತ್ ಅವರು ಭೇಟಿಯಾಗಿ ಕ್ಲಾಪ್ ಮಾಡಿದ್ದಾರೆ. ಹಾಗೂ ಪುನೀತ್ ಅವರ ಎರಡು ಮೂರು ಚಿತ್ರಗಳಲ್ಲಿ ದರ್ಶನ್ ಅವರು ಅತಿಥಿಯಾಗಿ ಪಾತ್ರ ನಿರ್ವಹಿಸಿದ್ದಾರೆ.

ಇಬ್ಬರ ಸ್ನೇಹವನ್ನು ಅಷ್ಟಾಗಿ ಎಲ್ಲಿಯೂ ಅವರಿಬ್ಬರೂ ತೋರಿಸುವುದಿಲ್ಲ. ಆದರೆ ಇಬ್ಬರ ನಡುವೆ ಅಗಾಧ ಸ್ನೇಹವಿರುವುದು ಈ ರೀತಿ ಪರಸ್ಪರ ಸಹಾಯ ಮಾಡಿದಾಗ ತೋರುತ್ತದೆ.

- Advertisement -

Leave A Reply

Your email address will not be published.

twenty + two =