ಮೀಟೂ ಅಭಿಯಾನಕ್ಕೆ ತುಪ್ಪದ ಹುಡುಗಿ ರಾಗಿಣಿ ಎಂಟ್ರಿ..! ರಾಗಿಣಿ ಹೇಳಿದ್ದೇನು ಗೊತ್ತಾ?

0 294

- Advertisement -

ಇತ್ತೀಚಿನ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ವಿಚಾರವೆಂದರೆ ಅದು ಮೀಟು ಅಭಿಯಾನ. ಈ ಅಭಿಯಾನದ ಅಡಿಯಲ್ಲಿ ಹಲವಾರು ನಟಿಯರು ಮತ್ತು ಮಹಿಳೆಯರು ತಮ್ಮ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಓಪನ್ ಆಗಿ ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಲೈಂಗಿಕ ಕಿರುಕುಳ ಎಸಗಿದ ಪುರುಷರ ಮುಖವಾಡ ಕಳಚುತ್ತಿದೆ.

 

 

ಇನ್ನು ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ಕೆಲ ನಟಿಯರು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಇದೇ ಮೀಟು ಅಭಿಯಾನದ ಅಡಿಯಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅನೇಕ ಕಲಾವಿದರು ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇದೀಗ ರಾಗಿಣಿ ದ್ವಿವೇದಿ ಅವರು ಸಹ ಈ ಅಭಿಯಾನದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

 

 

 

 

 

ಮೀಟು ಅಭಿಯಾನದ ಅಡಿಯಲ್ಲಿ ಕೆಲ ನಟಿಯರು ತಮ್ಮ ಮೇಲೆ ಆದ ಲೈಂಗಿಕ ಕಿರುಕುಳವನ್ನು ವ್ಯಕ್ತಪಡಿಸುತ್ತಿದ್ದಾರೆ ಇದು ಸ್ವಾಗತಾರ್ಹ. ಯಾರ ಮೇಲೆ ನಿಜವಾಗಿಯೂ ಲೈಂಗಿಕ ಕಿರುಕುಳ ನಡೆದಿದೆಯೋ ಅಂತಹವರು ಈ ಅಭಿಯಾನದ ಅಡಿಯಲ್ಲಿ ತಮ್ಮ ಮೇಲೆ ಆದ ಕಿರುಕುಳದ ಬಗ್ಗೆ ಹೇಳಿಕೊಂಡರೆ ಒಳ್ಳೆಯದು. ಅದನ್ನು ಬಿಟ್ಟು ಪ್ರಚಾರದ ಗಿಮಿಕ್ ಗೋಸ್ಕರ ಸುಳ್ಳು ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ರಾಗಿಣಿ ದ್ವಿವೇದಿ ಅವರು ವ್ಯಕ್ತಪಡಿಸಿದ್ದಾರೆ.

- Advertisement -

Leave A Reply

Your email address will not be published.

five × 1 =