ಮೀಟೂ ವಿಚಾರ : ಕ್ಷಮೆಯಾಚಿಸಿದ ಶ್ರುತಿ ಹರಿಹರನ್..!

0 580

- Advertisement -

ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಚರ್ಚೆಯಲ್ಲಿರುವ ವಿಷಯವೆಂದರೆ ಅದು ನಟಿ ಶೃತಿ ಹರಿಹರನ್ ಅವರು ಮೀಟು ಅಡಿಯಲ್ಲಿ ಮಾಡುತ್ತಿರುವ ಲೈಂಗಿಕ ಕಿರುಕುಳದ ಆರೋಪ. ಹೌದು ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಕಳೆದ ವಾರ ಮಾಡಿದ್ದು ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 

 

ಇನ್ನು ಈ ಕುರಿತು ನಟಿ ಶ್ರುತಿ ಹರಿಹರನ್ ಅವರು ಇತ್ತೀಚೆಗಷ್ಟೇ ಪ್ರೆಸ್ಮೀಟ್ ಒಂದರಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಕ್ಷಮೆ ಯೊಂದನ್ನು ಜನರಲ್ಲಿ ಯಾಚಿಸಿದ್ದಾರೆ. ಹೌದು ನಟಿ ಶ್ರುತಿ ಹರಿಹರನ್ ಅವರು ಜನರಲ್ಲಿ ಬಹಿರಂಗವಾಗಿ ಕ್ಷಮೆಯನ್ನೂ ಯಾಚಿಸಿದ್ದಾರೆ. ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆಯನ್ನು ಯಾಚಿಸಿದ್ದಾರೆ ಎಂದುಕೊಂಡರೆ ಅದು ತಪ್ಪು ಬದಲಾಗಿ ಶೃತಿ ಹರಿಹರನ್ ಅವರು ಕ್ಷಮೆಯಾಚಿಸಿದ್ದು ಬೇರೆಯದ್ದೇ ವಿಷಯಕ್ಕೆ.

 

 

 

 

 

ಹೌದು ನಟಿ ಶೃತಿ ಹರಿಹರನ್ ಅವರು ಕ್ಷಮೆಯನ್ನು ಯಾಚಿಸಿದ್ದು ಈ ಹಿಂದೆ ಅವರು ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಸೆಕ್ಸ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಓಪನ್ ಆಗಿ ಹೇಳಿಕೊಂಡಿದ್ದರು. ಇದೀಗ ಆ ವಿಷಯದಿಂದ ಹಲವಾರು ಜನರು ಅವರನ್ನು ಟೀಕೆ ಮಾಡುತ್ತಿರುವುದನ್ನು ಗಮನಿಸಿದ ಶ್ರುತಿ ಹರಿಹರನ್ ಅವರು ಈ ವಿಷಯವಾಗಿ ಯಾರಿಗಾದರೂ ಬೇಸರವಾಗಿದ್ದರೆ ನಾನು ಕೈಮುಗಿದು ಕ್ಷಮೆ ಕೇಳುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.

- Advertisement -

Leave A Reply

Your email address will not be published.

two × five =