ಮೊದಲ ಬಾರಿಗೆ ಆಕ್ಟಿಂಗ್ ಬದಿಗಿಟ್ಟು ಇಂಟರ್ವ್ಯೂ ಮಾಡಲು ಹೊರಟ ಪವರ್ ಸ್ಟಾರ್

0 60

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಷ್ಟು ವರ್ಷಗಳ ಕಾಲ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೂತು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಈಗವರು ಸಂದರ್ಶನಕ್ಕಾಗಿ ಬದಲಾಗಿದ್ದಾರೆ.

ಕವಲು ದಾರಿ ಚಿತ್ರದ ಸಂಗೀತ ನಿರ್ದೇಶಕರಾದ ಚರಣ್ ರಾಜ್ ಅವರನ್ನು ಪುನೀತ್ ಸಂದರ್ಶನ ಮಾಡಿದ್ದಾರೆ. ಅನಂತ್ ನಾಗ್, ಅಚ್ಚುತ್ ಕುಮಾರ್, ರಿಷಿ ಮೊದಲಾದವರು ಮುಖ್ಯ ಪಾತ್ರಗಳಲ್ಲಿ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರ ನಾಳೆ ತೆರೆ ಕಾಣಲಿದ್ದು ಸಸ್ಪೆನ್ಸ್ ಥ್ರಿಲ್ಲರ್ ರೀತಿಯ ಸಿನಿಮಾ ಇದಾಗಿದೆ. ಪುನೀತ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ಮೂಡಿ ಬಂದಿದೆ. ಪ್ರತಿ ಬಾರಿ ಬೇರೆಯವರು ಪುನೀತ್ ಅವರನ್ನು ಸಂದರ್ಶನ ಮಾಡಿದರೆ, ಈ ಬಾರಿ ಪುನೀತ್ ಅವರೆ ಹೊಸತನ ಇರಲಿ ಎಂದು ಚರಣ್ ರಾಜ್ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಪಿಆರ್ ಕೆ ಪ್ರೊಡಕ್ಷನ್ ಅವರ ಮೊದಲ ಸಿನಿಮಾ ಇದಾಗಿದ್ದು ರಿಷಿ ಈ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಹೇಗಿದೆ ಎಂದು ನಾಳೆ ಚಿತ್ರಮಂದಿರಗಳಲ್ಲಿ ಹೋಗಿ ನೋಡಬೇಕಿದೆ.

- Advertisement -

Leave A Reply

Your email address will not be published.

5 × 1 =