ಯಶ್-ದರ್ಶನ್ ಗೆ ಬೈದ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರಾಧಿಕಾ ಪಂಡಿತ್

0 853

- Advertisement -

ಮಂಡ್ಯದ ಚುನಾವಣೆ ಈಗ ಸ್ಪರ್ಧಿಯ ನಾಯಕತ್ವಕ್ಕಿಂತ ಪ್ರತಿಷ್ಠೆ ಮೇಲೆ ನಿಂತಿದೆ. ಒಂದೆಡೆ ಸಿಎಂ ಅವರ ಪುತ್ರ ನಿಖಿಲ್ ಗೆಲುವಿಗೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಸುಮಲತಾ ಅಂಬರೀಶ್ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಈ ಜೋಡೆತ್ತುಗಳನ್ನು ಮಟ್ಟಹಾಕಲು ಸಿಎಂ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಟಾಂಗ್ ಕೊಡುವಂತೆ ಈಗ ಸ್ಟಾರ್ ನಟರ ಪತ್ನಿಯರು ಸಹ ಸುಮಲತ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

ಈಗಷ್ಟೇ ಮಗುವಿಗೆ ಜನ್ಮ ಮಾಡಿರುವ ರಾಧಿಕಾ ಪಂಡಿತ್ ನಾಯಕಿಯಾಗಿದ್ದರು ಸಹ ಸುಮಲತಾ ಅವರ ಪರ ಪ್ರಚಾರ ಮಾಡಲು ಬರುತ್ತಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ತಾಯಿ ಸ್ಥಾನದಲ್ಲಿರುವ ಸುಮಲತಾ ಅವರ ಪರ ವೋಟ್ ಕೇಳಿ ಅಲ್ಲಿ ಇರುವ ಆದಷ್ಟು ಮಹಿಳೆಯರ ಗಮನವನ್ನು ಸೆಳೆಯುವ ಸಾಧ್ಯತೆ ಇವೆ .

ಏಪ್ರಿಲ್ 16ರಂದು ನಡೆಯಲಿರುವ ಬೃಹತ್ ರ್ಯಾಲಿಯಲ್ಲಿ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಭಾಗಿಯಾಗಲಿದ್ದಾರೆ. ಈ ಸಮಯದಲ್ಲಿ ರಾಧಿಕಾ ಹಾಗೂ ವಿಜಯಲಕ್ಷ್ಮಿಯವರು ಜೊತೆಗೂಡಿ ಸುಮಲತಾ ಅವರ ಪರ ಮತ ಕೇಳುವ ಸಾಧ್ಯತೆ ಇದೆ. ಇವೆಲ್ಲದಕ್ಕೂ ಸಿಎಂ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

- Advertisement -

Leave A Reply

Your email address will not be published.

three × 3 =