ಯಶ್ ಮತ್ತು ದರ್ಶನ್ ಒಟ್ಟಿಗೆ ಮಾಡುವ ಚಿತ್ರದ ಬಗ್ಗೆ ದರ್ಶನ್ ಹೇಳಿದ್ದೇನು

0 244

- Advertisement -

ಮಂಡ್ಯದಲ್ಲಿ ಚುನಾವಣೆ ರಂಗು ದಿನೇ ದಿನೇ ಹೆಚ್ಚುತ್ತಲೇ ಇದೆ. ಚುನಾವಣೆ ಈಗ ಸ್ಪರ್ಧಿಗಳ ಪ್ರತಿಷ್ಠೆಗೆ ತಿರುಗಿದೆ. ಸುಮಲತ ಪರವಾಗಿ ಇಡೀ ಚಿತ್ರರಂಗವೇ ನಿಂತಿದೆ. ಇಂಥ ನಿಖಿಲ್ ಕುಮಾರಸ್ವಾಮಿ ಚಿತ್ರರಂಗವನ್ನು ಎದುರು ಹಾಕಿಕೊಂಡಿದ್ದಾರೆ.

ನಟ ಯಶ್ ಹಾಗೂ ದರ್ಶನ್ ಜೋಡಿ ಎತ್ತುಗಳ ಆಗಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಇವರನ್ನು ಸಿಎಂ ಕುಮಾರಸ್ವಾಮಿ ಕಳ್ಳ ಎತ್ತುಗಳೆಂದು ಹೇಳಿಕೆ ನೀಡಿದ್ದರು. ದರ್ಶನ್ ಯಶ್ ಜೋಡೆತ್ತು ಪದಗಳನ್ನು ಹೇಳಿದ್ದೇ ಹೇಳಿದ್ದು ಫಿಲಂ ಚೇಂಬರ್ ನಲ್ಲಿ ಈ ಹೆಸರನ್ನು ಇಟ್ಟುಕೊಂಡು ಸಿನಿಮಾ ಮಾಡಲು ಜನ ಕ್ಯೂ ನಿಂತಿದ್ದಾರೆ ಅಂತೆ.

ಇದರ ಸಲುವಾಗಿ ಮಂಡ್ಯದಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ದರ್ಶನ್ ಅವರನ್ನು ಪ್ರಶ್ನಿಸಲಾಯಿತು. ಒಳ್ಳೆ ಕಥೆ ಹಾಗೂ ನಿರ್ದೇಶಕರು ಸಿಕ್ಕರೆ ದರ್ಶನ್ ಹಾಗೂ ಎಸ್ ಜೋಡೆತ್ತು ಎಂಬ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.

ಅಧಿಕೃತವಾಗಿ ದರ್ಶನ್ ಯಶ್ ಅವರ ಜೊತೆ ನಟಿಸಲು ಒಪ್ಪಿಕೊಂಡಿರುವುದು ಅಭಿಮಾನಿಗಳಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಹಲವು ನಿರ್ದೇಶಕರು ಈಗಾಗಲೇ ಇವರಿಬ್ಬರನ್ನು ಕರೆ ಮಾಡಿ ಕಥೆ ಹೇಳಲು ಶುರು ಮಾಡಿದ್ದಾರಂತೆ. ಚುನಾವಣೆಯಲ್ಲಿ ಮುಗಿದು ಸಮರ ತಣ್ಣಗಾದ ಮೇಲೆ ಏನಾಗುತ್ತದೆ ಎಂದು ಕಾದು ನೋಡಬೇಕು

- Advertisement -

Leave A Reply

Your email address will not be published.

2 × five =