“ರಕ್ಷಿತ್ ಶೆಟ್ಟಿ ಅವರ ಚಿತ್ರದಲ್ಲಿ ನಟಿಸುತಿರೋದ್ಕೆ” ಏನ್ ಅಂದ್ರು ಸಾನ್ವಿ

0 224

- Advertisement -

ನನ್ನ ಮಟ್ಟಿಗೆ ಇದೊಂದು ವಿಶೇಷ ಸಿನಿಮಾ. ಚಿತ್ರದ ಕತೆ, ಮೇಕಿಂಗ್‌ ಶೈಲಿ, ನಿರೂಪಣೆಯ ರೀತಿ, ಲೊಕೇಷನ್‌ ವಿಚಾರ ಎಲ್ಲದರಲ್ಲೂ ಅದ್ಭುತ. ಇದೊಂದು ಬಿಗ್‌ ಬಜೆಟ್‌ ಸಿನಿಮಾ ಕೂಡ.

ಇಂತಹ ಸಿನಿಮಾದಲ್ಲಿ ನಾನು ನಾಯಕಿ ಆಗಿದ್ದೇ ಲಕ್ಕಿ ಅಂತೆನಿಸುತ್ತಿದೆ.
ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲೇ ಭಿನ್ನವಾದ ಪಾತ್ರ ಇದು. ಲಕ್ಷ್ಮೀ ಅಂತ ಪಾತ್ರದ ಹೆಸರು. ತುಂಬಾ ಬುದ್ಧಿವಂತೆ. ಮೆಚ್ಯೂರ್ಡ್‌ ಕ್ಯಾರೆಕ್ಟರ್‌.

ಈ ತರಹದ ಪಾತ್ರ ಸಿಕ್ಕಿದ್ದು ಇದೇ ಮೊದಲು. ಲೂನಾ ನನ್ನ ಪಾತ್ರದ ಪ್ರಮುಖ ಆಕರ್ಷಣೆ. ಆ ಲೂನಾ ಆಕೆಯ ಜರ್ನಿಯಲ್ಲಿ ವಿಶೇಷ ಪಾತ್ರ ವಹಿಸುತ್ತದೆ ಎಂದ ಸಾನ್ವಿ.

ರಕ್ಷಿತ್ ಶೆಟ್ಟಿ ಜತೆ ಸ್ಕ್ರೀನ್ ಶೇರ್ ಮಾಡಲು ಖುಷಿಯಾಗ್ತಿದೆ .
ಅವರೊಬ್ಬ ಒಳ್ಳೆಯ ನಟ ನಟನೆ, ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದ ಮೇಲೆ ಪ್ಯಾಷನ್‌ ಇರುವಂತಹ ವ್ಯಕ್ತಿ. ಶಾನ್ವಿ ರಕ್ಷಿತ್ ಬಗ್ಗೆ ಹೆಳಿದ್ದು ಹೀಗೆ.

- Advertisement -

Leave A Reply

Your email address will not be published.

seventeen + 1 =