ಸ್ಯಾಂಡಲ್ ವುಡ್ ನ ಹಾಟ್ ಕ್ವೀನ್ ರಾಗಿಣಿ ದ್ವಿವೇದಿ ಅವರಿಗಾಗಿ ಇಬ್ಬರು ವ್ಯಕ್ತಿಗಳು ಹೊಡೆದಾಡಿರುವ ಘಟನೆ ಬೆಳಕಿಗೆ ಬಂದಿದೆ

0 251

- Advertisement -

ಕನ್ನಡದ ಹಾಟ್ ನಟಿ ರಾಗಿಣಿ ದ್ವಿವೇದಿ ಅವರಿಗೋಸ್ಕರ ಇಬ್ಬರು ವ್ಯಕ್ತಿ ಹೊಡೆದಾಡಿ ಕೊಂಡಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ರಿಟ್ಜ್ ಕಾರ್ಟೆನ್ ಹೋಟೆಲ್ ನಲ್ಲಿ ರಾಗಿಣಿ ಅದರ ಮುಂದೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಕೋರಮಂಗಲದಲ್ಲಿ ಆರ್ ಟಿ ಓ ಆಫೀಸ್ ನ ಅಧಿಕಾರಿಯಾಗಿರುವ ರವಿಶಂಕರ್ ಅವರ ಜೊತೆ ರಾಗಿಣಿ ಅವರು ಹೋಟೆಲ್ ಗೆ ತೆರಳಿದ್ದರು. ಇವರಿಬ್ಬರನ್ನು ಜೊತೆಗೆ ನೋಡಿದ ಉದ್ಯಮಿ ಹಾಗೂ ನಿರ್ಮಾಪಕ ಶಿವ ಪ್ರಕಾಶ್ ಎಂಬುವವರು ರವಿಶಂಕರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಶಿವಪ್ರಕಾಶ್ ತಮ್ಮ ಸ್ನೇಹಿತರೊಡನೆ ಪಾರ್ಟಿಗೆಂದು ಹೋಟಲ್ ಗೆ ಬಂದಿದ್ದರು ಅಲ್ಲಿ ಇವರಿಬ್ಬರನ್ನು ನೋಡಿ ಹಲ್ಲೆ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಶಿವಪ್ರಕಾಶ್ ಬಿಯರ್ ಬಾಟಲ್ ನಿಂದ ರವಿಶಂಕರ್ ಅವರ ತಲೆ ಮೇಲೆ ಜೋರಾಗಿ ಹೊಡೆದಿದ್ದಾರೆ. ಈ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ರಾಗಿಣಿ ಅವರ ಜೊತೆ ಓಡಾಡುವಂತಿಲ್ಲ ಎಂಬ ಜೀವ ಬೆದರಿಕೆ ಹಾಕುತ್ತಿರುವ ಶಿವಪ್ರಕಾಶ್ ಮೇಲೆ ರವಿಶಂಕರ್ ದೂರು ದಾಖಲಿಸಿದ್ದಾರೆ. ಹಿಂದೆ ಶಿವಪ್ರಕಾಶ್ ಅವರ ಜೊತೆ ಬಹಳ ಆತ್ಮೀಯತೆ ಹೊಂದಿದ್ದ ರಾಗಿಣಿ ಮನಸ್ತಾಪಗಳಿಂದ ದೂರ ಆಗಿ ಆರ್ ಟಿ ಓ ಆಫೀಸ್ ಅಧಿಕಾರಿ ರವಿಶಂಕರ್ ಅವರ ಜೊತೆ ಸ್ನೇಹ ಬೆಳೆಸಿದ್ದರು. ಈ ಕಾರಣದಿಂದಾಗಿ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತದೆ.

- Advertisement -

Leave A Reply

Your email address will not be published.

3 × 2 =